ಮುಂಗಸಿ ಅಥವಾ ಮುಂಗುಸಿ ( ) ಇದರ ವೈಜ್ಞಾನಿಕ ಹೆಸರು: ಹರ್ಪೆಸ್ಟಿಸ್ ಎಡ್ವಡ್ಸಿ ( ) ಭಾರತದಲ್ಲಿ ಎಲ್ಲೆಡೆ ಕಂಡು ಬರುವ ಪ್ರಾಣಿ. ದಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸದೆ ಹೆಚ್ಚಾಗಿ ಪೊದೆಗಳಲ್ಲಿ, ಹಳೆಯ ಮರದ ಪೊಟರೆಗಳಲ್ಲಿ, ಹುತ್ತಗಳ ಬಳಿಯಲ್ಲಿ ಕಾಣಸಿಗುವುದು. ಕಂದು ಹಳದಿಯ ಬೂದು ಛಾಯೆಯ ಮೈ ಬಣ್ಣ. ಇದರ ಮೈಮೇಲಿನ ರೋಮಗಳ ಮೇಲೆ ಕರಿ ಎಳೆಗಪ್ಪು ಬಣ್ಣದ ಉಂಗುರಗಳಂತಹ ಗುರುತು ಇರುವುದು. ಇಲಿ, ಹೆಗ್ಗಣ, ಹಾವು, ಕಪ್ಪೆ, ಚೇಳು, ಹಣ್ಣುಗಳು ಇವುಗಳ ಆಹಾರ. ಇದು ಹಾವುಗಳ ದ್ವೇಷಿ. ಹಾವುಗಳನ್ನು ತನ್ನ ಚಾಣಾಕ್ಷತನದಿಂದ ನಿಗ್ರಹಿಸುವುದರಲ್ಲಿ ಅಗ್ರಗಣ್ಯ. ಹಾವಿನ ವಿಷಕ್ಕೆ ಸ್ವಲ್ಪ ಮಟ್ಟಿನ ಪ್ರತಿರೋಧವನ್ನು ಹೊಂದಿದೆ. ಸುಮಾರು ೬೦ ದಿನಗಳ ಗರ್ಭಾವಧಿ ಇದೆ. ಆಯುಃ ಪ್ರಮಾಣ ೭-೮ ವರ್ಷಗಳು. == ಉಲ್ಲೇಖಗಳು ==